ಭಾನುವಾರ, ಮೇ 27, 2018

ತ್ರಿವೇಣಿ ಯವರ ಜೀವನ ಮತ್ತು ಸಾಹಿತ್ಯ ಪರಿಚಯ

ತ್ರಿವೇಣಿ

ತ್ರಿವೇಣಿ

ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ಧರಾದವರು ಶ್ರೀಮತಿ ಅನಸೂಯ ಶಂಕರ್. ಇವರು ಕನ್ನಡದ ಪ್ರಮುಖ ಕಾದಂಬರಿಕಾರರಲ್ಲೊಬ್ಬರು. ಹಲವಾರು ಜನಪ್ರಿಯ ಕಾದಂಬರಿಗಳ ಮೂಲಕ ಪ್ರಸಿದ್ಧಿಯಾಗಿದ್ದಾರೆ. ಕನ್ನಡ ಸಾಹಿತ್ಯದ ಪ್ರಮುಖ ಬರಹಗಾರ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ.

ಪರಿಚಯಸಂಪಾದಿಸಿ

ತ್ರಿವೇಣಿಯವರು ಸೆಪ್ಟಂಬರ್ ೧೧೯೨೮ರಂದುಮಂಡ್ಯದಲ್ಲಿಜನಿಸಿದರು. ತಂದೆ ಬಿ.ಎಮ್.ಕೃಷ್ಣಸ್ವಾಮಿ, ತಾಯಿ ತಂಗಮ್ಮ. ಇವರ ಹೈಸ್ಕೂಲ್‍ವರೆಗಿನ ಶಿಕ್ಷಣ ಮಂಡ್ಯದಲ್ಲಿ ಆಯಿತು. ಕಾಲೇಜು ಶಿಕ್ಷಣ ಮೈಸೂರಿನಲ್ಲಿಆಯಿತು. ೧೯೪೭ರಲ್ಲಿ ಮಹಾರಾಜಾ ಕಾಲೇಜಿನಿಂದ ಮನಃಶಾಸ್ತ್ರದಲ್ಲಿ ಸಿದ್ದೇಗೌಡ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು.ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಸೋದರನ ಪುತ್ರಿ ಇವರು.ಮನಃಶಾಸ್ತ್ರದ ಪದವೀಧರೆಯಾದ ತ್ರಿವೇಣಿಯವರ ಅನೇಕ ಕೃತಿಗಳು ಮನಃಶಾಸ್ತ್ರಕ್ಕೆ ಸಂಬಂಧಪಟ್ಟವು. ಮನಃಶಾಸ್ತ್ರದ ಅಧ್ಯಯನಕ್ಕೆ ಸಂಬಂಧಪಟ್ಟ ಸನ್ನಿವೇಶಗಳು ಹಾಗೂ ಉದಾಹರಣೆಗಳು ಅವರ ಅನೇಕ ಸಣ್ಣ ಕಥೆಗಳು ಹಾಗೂ ಕಾದಂಬರಿಗಳಲ್ಲಿ ಕಂಡುಬರುತ್ತವೆ.

ಕೃತಿಗಳುಸಂಪಾದಿಸಿ

ಕಾದಂಬರಿಗಳುಸಂಪಾದಿಸಿ

ಹಣ್ಣೆಲೆ ಚಿಗುರಿದಾಗಬೆಳ್ಳಿಮೋಡಶರಪಂಜರಮುಕ್ತಿಹೂವು ಹಣ್ಣುಕಾಶಿಯಾತ್ರೆದೂರದ ಬೆಟ್ಟಬೆಕ್ಕಿನ ಕಣ್ಣುಬಾನು ಬೆಳಗಿತುಹೃದಯಗೀತೆಕೀಲುಗೊಂಬೆಅಪಸ್ವರಅಪಜಯತಾವರೆಯ ಕೊಳಸೋತು ಗೆದ್ದವಳುಕಂಕಣಮುಚ್ಚಿದ ಬಾಗಿಲುಮೊದಲ ಹೆಜ್ಜೆಅವಳ ಮನೆವಸಂತಗಾನತೀರ್ಥಯಾತ್ರೆಎರಡು ಮನಸ್ಸುಹೆಂಡತಿಯ ಹೆಸರುಸಮಸ್ಯೆಯ ಮಗುಅವಳ ಮಗಳು (ಈ ಕಾದಂಬರಿಯು ಅರ್ಧವಾಗಿದ್ದಾಗ ತ್ರಿವೇಣಿಯವರು ನಿಧನರಾದರು. ಶ್ರೀಮತಿ ಎಮ್.ಸಿ.ಪದ್ಮಾ ಇದನ್ನು ಪೂರ್ಣಗೊಳಿಸಿದ್ದಾರೆ.)

ಕಥಾಸಂಕಲನಗಳುಸಂಪಾದಿಸಿ

ಸಮಸ್ಯೆಯ ಮಗುಎರಡು ಮನಸ್ಸುಹೆಂಡತಿಯ ಹೆಸರು

ಅನುವಾದಗೊಂಡ ಕೃತಿಗಳುಸಂಪಾದಿಸಿ

"ಅಪಸ್ವರ"ಮತ್ತು "ಅಪಜಯ" ಕಾದಂಬರಿಗಳನ್ನು ಮತ್ತು "ತ್ರಿವೇಣಿ ಸಪ್ತಕ್" ಎಂಬ ಹೆಸರಿನಲ್ಲಿ ಏಳು ಸಣ್ಣ ಕತೆಗಳನ್ನು ಹಿಂದಿಗೆ ಎಸ್.ಎಮ್.ರಾಮಸ್ವಾಮಿ ಅವರು ಅನುವಾದ ಮಾಡಿದ್ದಾರೆ.ಮೀರಾ ನರ್ವೆಕರ್ ಎನ್ನುವವರು "ಶರಪಂಜರ"ವನ್ನು "The Mad Woman" ಎಂಬ ಹೆಸರಿನಲ್ಲಿ ಇಂಗ್ಲಿಷ್ ಗೆ ಅನುವಾದಿಸಿದ್ದಾರೆ."ಬೆಕ್ಕಿನ ಕಣ್ಣು " ಕಾದಂಬರಿಯನ್ನು ಶರ್ವಾಣಿಯವರು ತೆಲುಗಿಗೆ ಅನುವಾದಿಸಿದ್ದಾರೆ.

ಚಲನಚಿತ್ರಗಳಾದ ಕೃತಿಗಳುಸಂಪಾದಿಸಿ

ತ್ರಿವೇಣಿಯವರ ೫ ಕಾದಂಬರಿಗಳು ಚಲನಚಿತ್ರಗಳಾಗಿವೆ.

ಹಣ್ಣೆಲೆ ಚಿಗುರಿದಾಗ (೧೯೬೮)ಬೆಳ್ಳಿಮೋಡ (೧೯೭೦)ಶರಪಂಜರ (೧೯೭೧)ಮುಕ್ತಿಹೂವು ಹಣ್ಣು (೧೯೯೩)

ಬೆಕ್ಕಿನ ಕಣ್ಣು ಕಾದಂಬರಿಯನ್ನು ಚಲಚ್ಚಿತ್ರವನ್ನಾಗಿ ನಿರ್ದೇಶಿಸಲು ಶ್ರೀ ಪುಟ್ಟಣ್ಣ ಕಣಗಾಲ್'ರು ಬಯಸಿದ್ದರು. ಆದರೆ ಕಾರಣಾಂತರದಿಂದ ಅದನ್ನು ಕನ್ನಡದಲ್ಲಿ ಮಾಡದೆಮಲಯಾಳಂನಲ್ಲಿ "ಪೂಚಕಣ್ಣಿ" ಎಂಬ ಹೆಸರಿನಲ್ಲಿ ನಿರ್ದೇಶಿಸಿದರು. [೧] ಪ್ರೇಮ್ ನಜೀರ್, ಅಡೂರ್ ಭಾಸಿ, ತಿಕ್ಕುರಿಸಿ ಸುಕುಮಾರನ್ ನಾಯರ್ ಮೊದಲಾದವರು ಅಭಿನಯಿಸಿದ ಈ ಚಿತ್ರ ೧೯೬೬ರಲ್ಲಿ ಬಿಡುಗಡೆಯಾಗಿ ಬಹಳ ಜನಪ್ರಿಯತೆಯನ್ನು ಗಳಿಸಿತ್ತು.

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ಲಭ್ಯವಿರುವ ಕೃತಿಗಳುಸಂಪಾದಿಸಿ

ಮೊದಲ ಹೆಜ್ಜೆಬಾನು ಬೆಳಗಿತುಸೋತು ಗೆದ್ದವಳು

ಕಿರುತೆರೆ ಧಾರವಾಹಿಗಳಾಗಿ ತ್ರಿವೇಣಿ ಕಾದಂಬರಿಗಳುಸಂಪಾದಿಸಿ

ತ್ರಿವೇಣಿ ಅವರ ಕಾದಂಬರಿ ಮತ್ತು ಕತೆಗಳನ್ನು ಆಧರಿಸಿ ನಟ ಶ್ರೀನಿವಾಸ ಮೂರ್ತಿ ಅವರು ಈ ಟೀವಿಗಾಗಿ ಧಾರಾವಾಹಿ ಸರಣಿ ಮಾಡಿದ್ದಾರೆ. ತ್ರಿವೇಣಿ ಅವರ 'ಅವಳ ಮನೆ', 'ಅಪಸ್ವರ', 'ಅಪಜಯ' ಮುಂತಾದ ಕಾದಂಬರಿಗಳನ್ನು ದೂರದರ್ಶನ ಮಾಧ್ಯಮಕ್ಕೆ ಅಳವಡಿಸಲಿದ್ದಾರೆ. ಈ ಧಾರಾವಾಹಿ ಜನವರಿ ೨೯ ೨೦೦೭ರಿಂದ ಪ್ರಸಾರವಾಗಲಿವೆ.

ಪುರಸ್ಕಾರಸಂಪಾದಿಸಿ

ಅವಳ ಮನೆ ಕಾದಂಬರಿಗೆ ೧೯೬೦ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ[೨]ಸಣ್ಣಕತೆಗಳ ಸಂಕಲನವಾದ ಸಮಸ್ಯೆಯ ಮಗುಪುಸ್ತಕಕ್ಕೆ ೧೯೬೨ರಲ್ಲಿ 'ದೇವರಾಜ್ ಪ್ರಶಸ್ತಿ' .

ನಿಧನಸಂಪಾದಿಸಿ

ತ್ರಿವೇಣಿಯವರು ತಮ್ಮ ಮೂವತ್ತೈದನೆಯ ವಯಸ್ಸಿನಲ್ಲಿಯೇ ಜುಲೈ ೨೯೧೯೬೩ರಂದು ನಿಧನರಾದರು.

ತ್ರಿವೇಣಿಯವರ ಕೃತಿಗಳ ಹಕ್ಕುಗಳು ಅವರ ಮಗಳಾದ ಮೀರಾ ಕುಮಾರ್ ಅವರಲ್ಲಿವೆ.

ಉಲ್ಲೇಖಸಂಪಾದಿಸಿ

 http://movies.bollysite.com/movie/poocha-kanni-1966.html ತ್ರಿವೇಣಿ' ನಿಧನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ