ಗುರುವಾರ, ಮೇ 24, 2018

ತೇಜಸ್ವಿಯವರ ಜೀವನ ಮತ್ತು ಸಾಹಿತ್ಯ ಪರಿಚಯ

ಪೂರ್ಣಚಂದ್ರ ತೇಜಸ್ವಿ

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿಕುವೆಂಪು ಅವರ ಪುತ್ರ ಹಾಗು ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗು ಸ್ವತಂತ್ರ ಪ್ರವೃತ್ತಿಯ ಬರಹಗಾರರು.[೧] ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಿನಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ,, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. [೨]

ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಪೂರ್ಣಚಂದ್ರ ತೇಜಸ್ವಿ

ಜನನಸೆಪ್ಟೆಂಬರ್ ೮ ೧೯೩೮
ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆಮರಣಏಪ್ರಿಲ್ ೫ ೨೦೦೭
ಮೂಡಿಗೆರೆಅಂತ್ಯ ಸಂಸ್ಕಾರ ಸ್ಥಳಕುಪ್ಪಳಿಶಿವಮೊಗ್ಗ ಜಿಲ್ಲೆಕಾವ್ಯನಾಮಪೂಚಂತೇವೃತ್ತಿಕೃಷಿಕ, ಲೇಖಕ, ಛಾಯಚಿತ್ರಗಾರರಾಷ್ಟ್ರೀಯತೆಭಾರತೀಯಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾನಿಲಯಕಾಲ20ನೆಯ ಶತಮಾನಪ್ರಕಾರ/ಶೈಲಿಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಜನಪ್ರಿಯ ವಿಜ್ಞಾನವಿಷಯಪರಿಸರ, ವಿಜ್ಞಾನಸಾಹಿತ್ಯ ಚಳುವಳಿನವ್ಯಪ್ರಮುಖ ಪ್ರಶಸ್ತಿ(ಗಳು)ಪಂಪ ಪ್ರಶಸ್ತಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಬಾಳ ಸಂಗಾತಿರಾಜೇಶ್ವರಿಮಕ್ಕಳುಸುಸ್ಮಿತಾ, ಈಶಾನ್ಯೆ

ಪ್ರಭಾವಗಳು

ಕುವೆಂಪುಶಿವರಾಮ ಕಾರಂತ, ರಾಮಮನೋಹರ ಲೋಹಿಯಾ

www.tejaswivismaya.org

' ಪೂರ್ಣಚಂದ್ರ ತೇಜಸ್ವಿ'

ಜೀವನಸಂಪಾದಿಸಿ

ತಂದೆ ಪುಟ್ಟಪ್ಪ ಮತ್ತು ತಾಯಿಯ ಜೊತೆ ತೇಜಸ್ವಿ

ಜನನಸಂಪಾದಿಸಿ

ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ.ಅವರ ತಾಯಿ ಹೇಮಾವತಿ . ಇವರು ೧೯೩೮ ಸೆಪ್ಟೆಂಬರ್ ೮ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಜನಿಸಿದರು.

ಶಿಕ್ಷಣಸಂಪಾದಿಸಿ

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು.

ವೃತ್ತಿ-ಪ್ರವೃತ್ತಿಸಂಪಾದಿಸಿ

ಇವರ ಮೊದಲ ಕಥೆ ಲಿಂಗ ಬಂದ. ಈ ಕಥೆಗಾಗಿ ಅವರು ರಾಜೋತ್ಸವ ಪ್ರಶಸ್ತಿ ಪಡೆದರು. ಸ್ನಾತಕೊತ್ತರ ಪದವಿಯ ನಂತರ ಓರಗೆಯ ಇತರೆ ಬರಹಗಾರರಂತೆ ಅದ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆವ್ಯವಸಾಯಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ವೈವಾಹಿಕ ಬದುಕುಸಂಪಾದಿಸಿ

ಇವರ ಪತ್ನಿ ರಾಜೇಶ್ವರಿ. ಇವರೀಗ ತೇಜಸ್ವಿಯವರ ಪ್ರೀತಿಯ ಮನೆ ಮೂಡಿಗೆರೆಯ 'ನಿರುತ್ತರ'ದಲ್ಲಿ ಜೀವಿಸುತ್ತಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಸುಸ್ಮಿತಾ ಹಾಗು ಈಶಾನ್ಯೆ. ಇವರಿಬ್ಬರೂ ಸಾಫ್ಟ್ ವೇರ್ ಪರಿಣತರು.

ನಿಧನಸಂಪಾದಿಸಿ

ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮನೆ 'ನಿರುತ್ತರ'ದಲ್ಲಿ ೨೦೦೭ರ ಏಪ್ರಿಲ್ ೫ರ ಮಧ್ಯಾಹ್ನ ೨ ಘಂಟೆಗೆ, ಹೃದಯಾಘಾತದಿಂದ ನಿಧನ ಹೊಂದಿದರು. ಆಗ ಇವರ ವಯಸ್ಸು ೬೯ ವರ್ಷ.

ಸಾಹಿತ್ಯ ಕೃಷಿಸಂಪಾದಿಸಿ

ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯಕ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಕಥೆ, ಕಾದಂಬರಿಗಳ ಮೂಲಕ, ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಆನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. "ಕರ್ವಾಲೋ" ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ.

ಕವನ ಸಂಕಲನಸಂಪಾದಿಸಿ

ಸೋಮುವಿನ ಸ್ವಗತ ಲಹರಿ ಮತ್ತು ಇತರ ಕವನಗಳು(೧೯೬೨)

ಕಾದಂಬರಿಗಳುಸಂಪಾದಿಸಿ

ಕರ್ವಾಲೋ (೧೯೮೦)ಚಿದಂಬರ ರಹಸ್ಯ (೧೯೮೫)ಜುಗಾರಿ ಕ್ರಾಸ್ (೧೯೯೪)ಮಾಯಾಲೋಕ (೨೦೦೫)ಕಾಡು ಮತ್ತು ಕ್ರೌರ್ಯ (೨೦೧೩)

ನೀಳ್ಗತೆಗಳುಸಂಪಾದಿಸಿ

ಸ್ವರೂಪ (೧೯೬೬)ನಿಗೂಢ ಮನುಷ್ಯರು (೧೯೭೩)

ಕಥಾಸಂಕಲನಸಂಪಾದಿಸಿ

ಹುಲಿಯೂರಿನ ಸರಹದ್ದು (೧೯೬೨)ಅಬಚೂರಿನ ಪೋಸ್ಟಾಫೀಸು (೧೯೭೩)ಕಿರಗೂರಿನ ಗಯ್ಯಾಳಿಗಳು (೧೯೯೧)ಪಾಕಕ್ರಾಂತಿ ಮತ್ತು ಇತರ ಕತೆಗಳು

ನಾಟಕಸಂಪಾದಿಸಿ

ಯಮಳ ಪ್ರಶ್ನೆ (೧೯೬೪)

ಆತ್ಮಕಥನಸಂಪಾದಿಸಿ

ಅಣ್ಣನ ನೆನಪು (೧೯೯೬) ಕುವೆಂಪು ಅವರ ಕುರಿತು

ಪ್ರವಾಸ ಕಥನಸಂಪಾದಿಸಿ

ಅಲೆಮಾರಿಯ ಅಂಡಮಾನ್ ಹಾಗು ಮಹಾನದಿ ನೈಲ್(೧೯೯೦)

ವಿಮರ್ಶಾ ಕೃತಿಗಳುಸಂಪಾದಿಸಿ

ವ್ಯಕ್ತಿ ವಿಶಿಷ್ಟ ಸಿಧ್ಧಾಂತ (೧೯೬೪)ವಿಮರ್ಶೆಯ ವಿಮರ್ಶೆಹೊಸ ವಿಚಾರಗಳು

ವಿಜ್ಞಾನ ಹಾಗೂ ಪರಿಸರ ಕುರಿತ ಕೃತಿಗಳುಸಂಪಾದಿಸಿ

ಪರಿಸರದ ಕತೆ (೧೯೯೧)ಮಿಸ್ಸಿಂಗ್ ಲಿಂಕ್ (೧೯೯೧)ಸಹಜ ಕೃಷಿ (೧೯೯೨)ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು (೧೯೯೩)ಹಕ್ಕಿ ಪುಕ್ಕಮಿಂಚುಳ್ಳಿ-ಕನ್ನಡ ನಾಡಿನ ಹಕ್ಕಿಗಳು-ಭಾಗ ೧ಹೆಜ್ಜೆ ಮೂಡದ ಹಾದಿ - ಕನ್ನಡ ನಾಡಿನ ಹಕ್ಕಿಗಳು-ಭಾಗ ೨ವಿಸ್ಮಯ -೧,೨,೩ (೧೯೯೩)ಫ್ಲೈಯಿಂಗ್ ಸಾಸರ್-ಭಾಗ ೧ ಮತ್ತು ೨ (೧೯೯೩)ನಡೆಯುವ ಕಡ್ಡಿ ಹಾರುವ ಎಲೆಮನಸೋಬು ಪೂಕೋವೋಕ ಅವರ "ಒಂದು ಹುಲ್ಲಿನ ಕ್ರಾಂತಿ " ಪುಸ್ತಕದ ವಿವರಣಾತ್ಮಕ ಕೃತಿ

ವೈಜ್ಞಾನಿಕ ಹಾಗೂ ಐತಿಹಾಸಿಕ ಲೇಖನಗಳ ಸಂಕಲನಸಂಪಾದಿಸಿ

ಶುಧ್ಧ ಸಾಹಿತ್ಯಿಕ ಮೌಲ್ಯ ಉಳ್ಳ ಕಥೆ ಕಾದಂಬರಿಗಳ ಸಂಗಡ ತೇಜಸ್ವಿಯವರು ಹಲವಾರು ವೈಜ್ಞಾನಿಕ ಮತ್ತು ಐತಿಹಾಸಿಕ ಲೇಖನ ಸಂಕಲನಗಳನ್ನು ಕನ್ನಡಕ್ಕೆ ತಂದಿದ್ದಾರೆ.

ಮಹಾಯುಧ್ಧ,ಹಾರುವ ತಟ್ಟೆಗಳು,ಮಹಾನದಿ ನೈಲ್ ಇತ್ಯಾದಿ.

ಮಿಲೇನಿಯಮ್ ಸರಣಿಸಂಪಾದಿಸಿ

ಹೊಸ ಮಿಲೇನಿಯಮ್‍ನ ಆರಂಭದಲ್ಲಿ ತೇಜಸ್ವಿಯವರು ೨೦ನೇ ಶತಮಾನದಲ್ಲಿ ಜಗತ್ತಿನಲ್ಲಿ ಮೂಡಿಬಂದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಬೃಹತ್ ಯೋಜನೆಯನ್ನು ಹಮ್ಮಿಕೊಂಡರು. ಇದರ ಫಲವೇ ಮಿಲೇನಿಯಮ್ ಕೃತಿ ಶ್ರೇಣಿ. ಈ ಕೃತಿಶ್ರೇಣಿಯಲ್ಲಿ ಒಟ್ಟು ೧೬ ಪುಸ್ತಕಗಳಿವೆ.

ಮಿಲೇನಿಯಮ್ ೧ - ಹುಡುಕಾಟಮಿಲೇನಿಯಮ್ ೨ - ಜೀವನ ಸಂಗ್ರಾಮಮಿಲೇನಿಯಮ್ ೩ - ಪೆಸಿಫಿಕ್ ದ್ವೀಪಗಳುಮಿಲೇನಿಯಮ್ ೪ - ಚಂದ್ರನ ಚೂರುಮಿಲೇನಿಯಮ್ ೫- ಮಿಸ್ಸಿಂಗ್ ಲಿಂಕ್ಮಿಲೇನಿಯಮ್ ೬ - ಮಹಾಯುದ್ಧ - ೧ಮಿಲೇನಿಯಮ್ ೭ - ಮಹಾಯುದ್ಧ - ೨ಮಿಲೇನಿಯಮ್ ೮ - ಮಹಾಯುದ್ಧ - ೩ಮಿಲೇನಿಯಮ್ ೯- ದೇಶವಿದೇಶ - ೧ಮಿಲೇನಿಯಮ್ ೧೦-ದೇಶವಿದೇಶ - ೨ಮಿಲೇನಿಯಮ್ ೧೨ - ದೇಶವಿದೇಶ - ೪ಮಿಲೇನಿಯಮ್ ೧೩ - ವಿಸ್ಮಯ ವಿಶ್ವ - ೧ಮಿಲೇನಿಯಮ್ ೧೪ - ಮಹಾಪಲಾಯನಮಿಲೇನಿಯಮ್ ೧೫ - ವಿಸ್ಮಯ ವಿಶ್ವ - ೨ಮಿಲೇನಿಯಮ್ ೧೬ - ಅಡ್ವೆಂಚರ್

ಅನುವಾದಸಂಪಾದಿಸಿ

ಬೆಳ್ಳಂದೂರಿನ ನರಭಕ್ಷಕ(ಕಾಡಿನ ಕಥೆಗಳು ಭಾಗ ೧)(೧೯೯೩) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರಪೆದ್ದಚೆರುವಿನ ರಾಕ್ಷಸ(ಕಾಡಿನ ಕಥೆಗಳು ಭಾಗ ೨)(೧೯೯೩) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರಜಾಲಹಳ್ಳಿಯ ಕುರ್ಕ(ಕಾಡಿನ ಕಥೆಗಳು ಭಾಗ ೩)(೧೯೯೪) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರಮುನಿಶಾಮಿ ಮತ್ತು ಮಾಗಡಿ ಚಿರತೆ(ಕಾಡಿನ ಕಥೆಗಳು ಭಾಗ ೪)ರುದ್ರಪ್ರಯಾಗದ ಭಯಾನಕ ನರಭಕ್ಷಕ (೧೯೯೫) -ಜಿಮ್ ಕಾರ್ಬೆಟ್‍ರವರ 'ಮ್ಯಾನ್ ಈಟಿಂಗ್ ಲೆಪಡ್೯ ಆಫ್ ರುದ್ರಪ್ರಯಾಗ್' ಕೃತಿಯ ಅನುವಾದ.ಪ್ಯಾಪಿಲಾನ್-೧,೨ - ಹೆನ್ರಿ ಷಾರಿಯೇ ರವರ 'Papillon' ಕೃತಿಯ ಅನುವಾದ

ಚಿತ್ರ ಸಂಕಲನಸಂಪಾದಿಸಿ

ಮಾಯೆಯ ಮುಖಗಳು

ಪ್ರಶಸ್ತಿಗಳುಸಂಪಾದಿಸಿ

ಚಿದಂಬರ ರಹಸ್ಯ ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದು ಈ ಕಾದಂಬರಿಗೆ ವರ್ಷದ ಉತ್ತಮ ಕೃತಿ ಬಹುಮಾನ ದೊರೆತುದಲ್ಲದೆ, ೧೯೮೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಾಪ್ತವಾಯಿತು.ಪಂಪ ಪ್ರಶಸ್ತಿ ೨೦೦೧ ರಲ್ಲಿರಾಜ್ಯೋತ್ಸವ ಪ್ರಶಸ್ತಿಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಸಹ ಅದೇ ವರ್ಷ ತೇಜಸ್ವಿ ಅವರಿಗೆ ಗೌರವ ಪ್ರಶಸ್ತಿ ನೀಡಿದೆ.ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ "ಅಬಚೂರಿನ ಪೋಸ್ಟಾಫೀಸು", "ತಬರನ ಕಥೆ" ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿವೆ.ಕುಬಿ ಮತ್ತು ಇಯಾಲ (ಕಥೆ)ಚಿತ್ರವು ರಾಜ್ಯ ಪ್ರಶಸ್ತಿ ಗಳಿಸಿತು.

ಚಲನಚಿತ್ರ ಮಾಧ್ಯಮದಲ್ಲಿಸಂಪಾದಿಸಿ

ಪೂರ್ಣಚಂದ್ರ ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು, ತಬರನ ಕಥೆ, ಕುಬಿ ಮತ್ತು ಇಯಾಲ ಹಾಗೂ ಕಿರಗೂರಿನ ಗಯ್ಯಾಳಿಗಳು ಕೃತಿಗಳು ಚಲನಚಿತ್ರಗಳಾಗಿವೆ.

ಓದಿಸಂಪಾದಿಸಿ

ನನ್ನ ತೇಜಸ್ವಿ (ಲೇ: ರಾಜೇಶ್ವರಿ ತೇಜಸ್ವಿ)ತೇಜಸ್ವಿ ನಾನು ಕಂಡಷ್ಟು (ಲೇ: ಧನಂಜಯ ಜೀವಾಳ ಬಿ. ಕೆ.)

ನೋಡಿಸಂಪಾದಿಸಿ

ಮತ್ತೆ ಮತ್ತೆ ತೇಜಸ್ವಿ (ಸಿ.ಡಿ.)

ಉಲೇಖಗಳುಸಂಪಾದಿಸಿ

 http://www.nammakannadanaadu.com/kavigalu/poornachandra-tejaswi.php http://www.thehindu.com/todays-paper/tp-features/tp-fridayreview/article2272137.ece

ಹೊರಗಿನ ಸಂಪರ್ಕಗಳುಸಂಪಾದಿಸಿ

ಪೂರ್ಣಚಂದ್ರ ತೇಜಸ್ವಿ ಕುರಿತ ಅಧಿಕೃತ ಅಂತರ್ಜಾಲ ತಾಣಸಂಪದ - ಪೂರ್ಣಚಂದ್ರ ತೇಜಸ್ವಿಯವರ ಸಂದರ್ಶನದ ಆಡಿಯೋ ಪಾಡ್‌ಕ್ಯಾಸ್ಟ್ಉದಯರವಿ.ಕಾಮ್ - ತೇಜಸ್ವಿಯವರ ಕೃತಿಗಳನ್ನು ಇಲ್ಲಿ ಖರೀದಿಸಬಹುದು


                           ಇಂತಿ 

                 ಮಂಜುನಾಥ ಕೆ ಎಂ

         ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

            ಬಸವಪಟ್ಟಣ (ಚಿರಡೋಣಿ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ