ಕನ್ನಡ ಗೀತೆಗಳು
ಮಂಜುನಾಥ ಕೆ ಎಂ
ಓ! ನನ್ನ ಚೇತನ...
-ಕುವೆಂಪು
ಓ! ನನ್ನ ಚೇತನ ಆಗು ನೀ ಅನಿಕೇತನ ||ರೂಪ ರೂಪಗಳನು ದಾಟಿ ನಾಮ ಕೋಟಿಗಳನು ಮೀಟಿ ಎದೆಯ ಬಿರಿಯ ಭಾವದೀಟಿ ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರಿ ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು ಕೊನೆಯನೆಂದು ಮುಟ್ಟದಿರು ಓ! ಅನಂತವಾಗಿರು ಅನಂತ ತಾನ್ ಅನಂತವಾಗಿ ಆಗುತಿಹನೆ ನಿತ್ಯಯೋಗಿ ಅನಂತ ನೀ ಅನಂತವಾಗು ಆಗು ಆಗು ಆಗು ಆಗು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ